ಹಾಡಹಗಲೇ ಮನೆಗೆ ಕನ್ನ ಹಾಕಿ ಚಿನ್ನಾಭರಣ ಕಳವು ಮಾಡಿರುವ ಘಟನೆ ಚಾಮರಾಜನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಸೋಮವಾರ ನಡೆದಿದೆ. ಶಿವು ಎಂಬವರ ಮನೆಯಲ್ಲಿ ಕಳ್ಳತನವಾಗಿದ್ದು ಬಾಗಿಲು ಮೀಟಿ ವಜ್ರದುಂಗುರ ಸೇರಿ 35 ಗ್ರಾಂ ಚಿನ್ನಾಭರಣವನ್ನು ಖದೀಮರು ಎಗರಿಸಿದ್ದಾರೆ. ಹಾಡಹಗಲೇ ಮನೆಗೆ ಕನ್ನ ಹಾಕಿದ್ದನ್ನು ಕಂಡು ನಿವಾಸಿಗಳು ದಂಗಾಗಿದ್ದಾರೆ. ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಚಾಮರಾಜನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣ ನಡೆದಿದೆ.