ಆರ್ ಸಿ ಬಿ ಗೆಲ್ಲಲೆಂದು ವಿಶೇಷ ಪೂಜೆ ಸಲ್ಲಿಸಿದ ಕರವೇ ಆರ್ ಸಿಬಿ ಮತ್ತು ಪಂಜಾಬ್ ನಡುವೆ ಐಪಿಎಲ್ ಫೈನಲ್ ಮ್ಯಾಚ್ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ವಿಘ್ನೇಶ್ವರನಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ಮಂಗಳವಾರ 10:30 ಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು ಕರ್ನಾಟಕ ರಕ್ಷಣಾ ವೇದಿಕೆ ಬಣದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿರುವ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಈ ಸಲಾ ಕಪ್ ನಮ್ದೆ, ಗೆದ್ದು ಬಾ ಆರ್ಸಿಬಿ, ಗೆದ್ದು ಬಾ ಆರ್ಸಿಬಿ ಎಂದು ಜಯಘೋಷ ಹಾಕಿ ಶುಭಕೋರಿದ್ದಾರೆ. ರನ್ ವಿಕ್ರಮ ವಿರಾಟ, ಮಯಾಂಕ್ ಮಹಿಮೆ ಎಂದು ಘೋಷಣೆ ವಾಕ್ಯ ಬರೆದು ಶುಭಕೋರಲಾಗಿದೆ