ಜೋಯಿಡಾ : ತಾಲೂಕಿನ ಶ್ರೀ ಕ್ಷೇತ್ರ ಉಳವಿಯಲ್ಲಿರುವ ಶಾದಿ ಮಹಲ್ ನಲ್ಲಿ ಮುಸ್ಲಿಂ ಧರ್ಮ ಬಾಂಧವರ ಪವಿತ್ರ ಹಬ್ಬವಾದ ಭಾವೈಕ್ಯತೆಯ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಶುಕ್ರವಾರ ಸಂಜೆ 5 ಗಂಟೆಗೆ ಆಚರಿಸಲಾಯ್ತು. ಕಾರ್ಯಕ್ರಮದಲ್ಲಿ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಣ್ಣು ಮಕ್ಕಳಿಗೆ ಪದವಿ ಶಿಕ್ಷಣ ಕೊಡಿಸಿದ ಕೊಡಿಸಿದ ಪಾಲಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಧರ್ಮ ಬಾಂಧವರು ಹಾಗೂ ಸರ್ವಧರ್ಮ ಬಂಧುಗಳು ಭಾಗವಹಿಸಿದ್ದರು.