ಮನೆಯೊಳಗೆ ಭಾರೀ ಗಾತ್ರದ ಉಡಾ ಹೊಕ್ಕ ಘಟನೆ ನಡೆದಿದೆ. ಮನೆಯ ಶೌಚಾಲಯ ಸೇರಿದ್ದ ಉಡಾ ಕಂಡು ಮನೆಯವರು ದಂಗಾಗಿದ್ದಾರೆ. ವಿಜಯಪುರ ನಗರದ ಕೀರ್ತಿ ನಗರದಲ್ಲಿ ಘಟನೆ ಸಂಭವಿಸಿದೆ. ಕೀರ್ತಿ ನಗರದ ನಿವಾಸಿ ಆರ್ ಎಂ ಬಿರಾದಾರ ಎಂಬುವರ ಮನೆಗೆ ಉಡಾ ಹೊಕ್ಕಿದೆ. ಮೊಸಳೆ ಆಕಾರದ ಸರಿಸೃಪವನ್ನು ಉಡಾ ಎಂದು ಕರೆಯುತ್ತಾರೆ. ವಿಜಯಪುರ ನಗರದಲ್ಲಿ ಇತ್ತಿಚೆಗೆ ಸುರಿದಿದ್ದ ಬಾರಿ ಮಳೆಯಿಂದ ಬಿಲಗಳಿಂದ ಹೊರ ಬರುತ್ತಿರುವ ಸರಿ ಸೃಪಗಳು...