ಜಗತ್ತಿನಲ್ಲಿ ಸೃಷ್ಠಿಕರ್ತನ ತದ್ರೂಪಿ ಸ್ಥಾನ ಗುರುವಿಗಿದೆ.ಎಂದು ಶಾಸಕ ಬಿ.ದೇವೇಂದ್ರಪ್ಪ ಪ್ರತಿಪಾದಿಸಿದರು. ಶುಕ್ರವಾರ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ 137ನೇ ಡಾ.ರಾಧಕೃಷ್ಣನ್ ಜಯಂತಿ ಅಂಗವಾಗಿ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಮಕ್ಕಳಿಗೆ ಶಿಕ್ಷಕರು ಸಂಸ್ಕಾರಯುತ ಶಿಕ್ಷಣ ನೀಡಬೇಕಿದೆ.ಇತ್ತೀಚೆಗೆ ಸಮಾಜದಲ್ಲಿ ಎಷ್ಟೇ ಸಂಪತ್ತು ಹೊಂದಿದ್ದರೂ ನೆಮ್ಮದಿ,ನಿದ್ರೆ ಸಿಗುತ್ತಿಲ್ಲ,ಮೊಬೈಲ್ ಸಂಸ್ಕöÈತಿಯಿAದ ಮಕ್ಕಳು ಸಂಸ್ಕಾರ ವಿಮುಖಗೊಂಡು ಶ್ವೇಚ್ಯಾಚಾರ ಮೆರೆದು ಕೌಟುಂಬಿಕ ವಿಘಟನೆ,ಅತ್ತೆ ಸೊಸೆಯರಲ್ಲಿ ವಿರಸ ಉಂಟಾಗಿ ಮನೆತನಗಳನ್ನು ಬೀದಿಗೆ ತರುವಲ್ಲಿ ಪ್ರಧಾನವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.