ಕಲಬುರಗಿ : ಪ್ರತಿಪಕ್ಷ ಬಿಜೆಪಿಗೆ ಮಾಡೋಕೆ ಕೆಲಸವಿಲ್ಲ..ಅದಕ್ಕೆ ಹೋರಾಟ ಮಾಡ್ತಿದೆ.. ಆದರೆ ನಮಗೆ ಕೇಂದ್ರದಿಂದ ಆಗ್ತಿರೋ ಅನ್ಯಾಯದ ಬಗ್ಗೆ ತುಟಿ ಬಿಚ್ತಿಲ್ಲವೆಂದು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕೆರಳಿ ಕೆಂಡವಾಗಿದ್ದಾರೆ.. ಸೆ10 ರಂದು ಮಧ್ಯಾನ 3.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಮದ್ದೂರು ಗಲಭೆ ಸಂಬಂಧ ಕರೆದ ಶಾಂತಿ ಸಭೆ ಬರೋದು ಬಿಟ್ಟು ಮದ್ದೂರು ಚಲೋ ಮಾಡಿದ್ದಾರೆ.. ಪ್ರಕರಣ ಸಂಬಂಧ 20 ಜನರನ್ನ ಅರೆಸ್ಟ್ ಮಾಡಲಾಗಿದೆಯೆಂದು ಹೇಳಿದರು. ಇನ್ನೂ ನಿಮ್ಮ ಮಕ್ಕಳನ್ನ ವಿದೇಶದಿಂದ ಮದ್ದೂರಿಗೆ ಕರೆಸಿ.. ಅಮಾಯಕ ಬಡ ಮಕ್ಕಳನ್ನ ಬಳಸಿಕೊಳ್ತಿದಿರಿ ಅಂತಾ ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ