ದಾವಣಗೆರೆ ನಗರದ ಮಟ್ಟಿಕಲ್‌ನಲ್ಲಿ ಅಳವಡಿಸಿದ್ದ ವಿವಾದಿತ ಬ್ಯಾನರ್ ತೆರವು ವಿವಾದದ ಸಂಬAಧ ಮೂವರು ಪೊಲೀಸರನ್ನು ಅಮಾನತ್ತು ಮಾಡಲಾಗಿದೆ ಎಂದು ಶನಿವಾರ ಸಂಜೆ 4 ಗಂಟೆಗೆ ಮಾಧ್ಯಮಗಳಿಗೆ ತಿಳಿದು ಬಂದಿದೆ. ಆರ್.ಎಂ.ಸಿ ಯಾರ್ಡ್ ಠಾನೆಯ ಪಿಎಸ್‌ಐ ಸಚಿನ್ ಬಿರಾದರ್, ಕಾನ್ಸ್ಟೇಬಲ್ ಷಣ್ಮುಖ ಮತ್ತು ಮಹಿಳಾ ಬೀಟ್ ಪೇದೆಯನ್ನು ಹಿರಿಯ ಅಧಿಕಾರಿಗಳು ಅಮಾನತ್ತು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸೂಕ್ಷ್ಮ ವಿಚಾರದ ನಿರ್ವಹಣೆಯಲ್ಲಿ ವಿಫಲ ಮತ್ತು ಕರ್ತವ್ಯ ಲೋಪದ ಅಧಾರದ ಮೇಲೆ ಅಮಾನತ್ತು ಮಾಡಲಾಗಿದೆ. ಕಳೆದ ಆ.28ರಂದು ಮಟ್ಟಿಕಲ್‌ನಲ್ಲಿ ಛತ್ರಪತಿ ಶಿವಾಜಿ ಅಫ್ಜಲ್ ಖಾನ್‌ನನ್ನು ಕೊಲ್ಲುವ ಬ್ಯಾನರ್ ಅನ್ನು ಹಾಕಲಾಗಿತ್ತು. ನಂತರ ಪೊಲೀಸರು ಅದನ್ನು ತೆರವು ಮಾಡಿದ ಮೇಲೆ ಹಿಂದೂ ಕಾರ್ಯಕರ್ತರು ಪ್ರತಿಭಟಿಸಿದ್ದರು.