ಕೊಪ್ಪಳ ಜಿಲ್ಲೆಯ ಹುಲಿಗಿ ಗ್ರಾಮದಲ್ಲಿನ ತುಂಗಭದ್ರಾ ನದಿಯ ದಡದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ತುಂಗಭದ್ರಾ ಆರತಿ ಉತ್ಸವ ಆಯೋಜನೆ ಮಾಡಲಾಗಿದೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಹೇಳಿದರು. ಆಗಸ್ಟ್ 25 ರಂದು ಮಧ್ಯಾಹ್ನ 3-30 ಗಂಟೆಗೆ ಹುಲಿಗೆಮ್ಮ ದೇವಿಯ ದೇವಸ್ಥಾನದ ಆಡಳಿತ ಮಂಡಳಿಯ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿ ತುಂಗಭದ್ರಾ ಜಲಾಶಯದಿಂದ 12 ಲಕ್ಷ ಎಕರೆ ಪ್ರದೇಶದ ಜಮೀನಿಗೆ ನೀರು ಒದಗಿಸುವ ತುಂಗಭದ್ರಾ ನದಿಗೆ ಆರತಿ ಮಾಡಲಾಗುತ್ತದೆ ಇದಕ್ಕೂ ಮೊದಲು ಮುಜರಾಯಿ ಇಲಾಖೆ ಮತ್ತು ಸಾರಿಗೆ ಸಚಿವ ರಾಮಲಿಂಗಾ ರಡ್ಡಿ ಅವರು ಬಾಗಿನ ಅರ್ಪಣೆ ಮಾಡಲಾಗುತ್ತದೆ ಹೊಮ ಹವನ ಮತ್ತು ಮುತ್ತೈದಿಯರಿಗೆ ಉಡಿತುಂಭುವ ಕಾರ್ಯಕ್ರಮ ನಡೆಯಲಿದೆ.