ಗಣೇಶ ಮತ್ತು ಈದ್ ಹಬ್ಬದ ಪ್ರಯುಕ್ತ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬೆಳ್ಳೂಡಿ ಮತ್ತು ಬನ್ನಿಕೋಡು ಗ್ರಾಮದಲ್ಲಿ ಪೊಲೀಸರು ಗುರುವಾರ ಸಂಜೆ 7 ಗಂಟೆಗೆ ಪಥಸಂಚಲನ ನಡೆಸಿದರು. ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕಾನೂನು & ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳೂಡಿ ಗ್ರಾಮದಲ್ಲಿ ಹಾಗೂ ಬನ್ನಿಕೋಡು ಗ್ರಾಮದಲ್ಲಿ ಪಿಎಸ್‌ಐ ಯುವರಾಜ್ ನೇತೃತ್ವದಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು.