ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಂಕ್ ಗಳಿಗೆ ಭೇಟಿ ನೀಡಿ ಭದ್ರತಾ ಮುಂಜಾಗೃತಾ ಕ್ರಮವಾಗಿ ಬ್ಯಾಂಕ್ ಆವರಣದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವಂತೆ ಹಾಗೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಪರಿಶೀಲಿಸುವಂತೆ ಬನಹಟ್ಟಿ ಪೊಲೀಸ್ ಠಾಣೆಯ ಪಿಎಸ್‌ಐ ಶಾಂತಾ ಹಳ್ಳಿ ಸೆ.೨೨ ಮಧ್ಯಾಹ್ನ ೩ ಗಂಟೆಗೆ ಹೇಳಿದರು. ಬ್ಯಾಂಕ್ ಬಾಗಿಲು ಹಾಗೂ ಲಾಕರ್ಗಳಿಗೆ ಅಲಾರಂ ಸಿಸ್ಟಂ ಅಳವಡಿಸುವಂತೆ, ಹೆಚ್ಚಿನ ಮೊತ್ತದ ನಗದು ಸಾಗಣೆ ವೇಳೆ ಕಡ್ಡಾಯವಾಗಿ ಭದ್ರತಾ ಸಿಬ್ಬಂದಿ ಇರುವಂತೆ, ಸಂಶಯಾಸ್ಪದ ವ್ಯಕ್ತಿಗಳ ಚಟುವಟಿಕೆ ಕಂಡುಬAದರೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಲಾಯಿತು.