ಅಗಸ್ಟ್ 16 ರಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಅತಿವೃಷ್ಟಿಯಾಗಿ ಸೋಯಾ ಹೆಸರು ಉದ್ದು ಸಂಪೂರ್ಣ ಹಾನಿ ಗಿಡಗಿದ್ದು, ಸೂಕ್ತ ಪರಿಹಾರ ಘೋಷಿಸಬೇಕು ಎಂದು ತಾಲೂಕಿನ ಬಸನಾಳ ಗ್ರಾಮದ ರೈತರು ಮನವಿ ಮಾಡಿದ್ದಾರೆ. ಬಿತ್ತನೆ ಬಳಿಕ ಸಕಾಲಕ್ಕೆ ಮಳೆ ಬಂದು ಬೆಳೆ ಚೆನ್ನಾಗಿದ್ದು ಇನ್ನೇನು ಈ ಬಾರಿ ಭರ್ಜರಿ ಬೆಳೆ ಬಂದು ಕೈತುಂಬ ಹಣ ಬರುತ್ತದೆ ಎಂದು ನಂಬಿದ್ದ ನಮಗೆ ಅತಿವೃಷ್ಟಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಕಂಗಲಾಗಿದ್ದೇವೆ.