ಮಳವಳ್ಳಿ : ತಾಲ್ಲೂಕಿನ ಶಿವನ ಸಮುದ್ರ ಆವರಣದಲ್ಲಿ ಏರ್ಪಾಡಾ ಗಿರುವ ಗಗನಚುಕ್ಕಿ ಜಲಪಾತೋ ತ್ಸವ ಅಂಗವಾಗಿ ನಡೆದ ಜಾನಪದ ಕಲಾ ತಂಡಗಳ ಮೆರವಣಿಗೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದ ಶಾಸಕ ಪಿಎಂ ನರೇಂದ್ರಸ್ವಾಮಿ ಶನಿವಾರ 4 ಗಂಟೆ ಸಮಯದಲ್ಲಿ ಚಾಲನೆ ನೀಡಿದರು. ಗಗನಚುಕ್ಕಿ ಜಲಪಾತದ ಮುಖ್ಯ ದ್ವಾರದ ಆರಂಭವಾದ ಮೆರವಣಿಗೆಗೆ ಶಾಸಕರ ಜೊತೆಗೆ ಜಿಲ್ಲಾಧಿಕಾರಿ ಡಾ. ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿ ಪಂ ಸಿಇಒ ನಂದಿನಿ ಅವರುಗಳು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಮಹಿಳೆಯರ ಪೂರ್ಣ ಕುಂಭದ ಜೊತೆಗೆ ತಮಟೆ, ಡೊಳ್ಳು, ಬೊಂಬೆ ಕುಣಿತ, ಪೂಜಾ ಕುಣಿತ, ಮಹಿಳೆಯರ ಡೊಳ್ಳು ಕುಣಿತ ಸೇರಿದಂತೆ ಹಲವು ಕಲಾತಂಡಗಳ ಮೆರವಣಿಗೆ ಗಮನ ಸೆಳೆಯಿತು.