ತಮ್ಮ ಮನೆಯಲ್ಲಿ ಬಾಲ್ಯವಿವಾಹ ನಡೆಸಲಾಗುತ್ತಿದೆ ಎಂದು ಕಿಡಿಗೇಡಿಗಳು ಮಕ್ಕಳ ಸಹಾಯವಾಣಿಗೆ ಸುಳ್ಳು ಮಾಹಿತಿ ಕೊಟ್ಟಿದ್ದಾರೆಂದು ವಿದ್ಯಾರ್ಥಿನಿ ಪಾಲಕರು ಆಕ್ರೋಶ ಹೊರಹಾಕಿದರು. ಬುಧವಾರ ಸಂಜೆ ವೀಡಿಯೋ ಹೇಳಿಕೆ ನೀಡಿರುವ ಚಿಕ್ಕತಾಯಮ್ಮ ಹಾಗೂ ಗ್ರಾಮದ ಕೆಲ ಮುಖಂಡರು, ಬಾಲ್ಯ ವಿವಾಹ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಹಾಯವಾಣಿಗೆ ಸುಳ್ಳು ದೂರು ಕೊಟ್ಟಿದ್ದಾರೆ, ತಪ್ಪು ಮಾಹಿತಿ ನೀಡುವ ಮೂಲಕ ಕುಟುಂಬ, ವಿದ್ಯಾರ್ಥಿನಿ ತೇಜೋವಧೆ ಮಾಡಲು ಮುಂದಾಗಿದ್ದಾರೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.