Download Now Banner

This browser does not support the video element.

ಗುಂಡ್ಲುಪೇಟೆ: ಬೇಗೂರು ಸಮೀಪದ ಕುರಟ್ಟಿ ಗ್ರಾಮದಲ್ಲಿ ಎರಡು ತಲೆಯುಳ್ಳ ಮೇಕೆ ಮರಿ ಜನನ

Gundlupet, Chamarajnagar | Sep 2, 2025
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಗಡಿ ಪ್ರದೇಶವಾದ ಕುರಟ್ಟಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಅಪರೂಪದ ಘಟನೆ ನಡೆದಿದೆ. ಗ್ರಾಮಸ್ಥ ರವಿ ಎಂಬುವವರ ಮನೆಯಲ್ಲಿನ ಮೇಕೆಗೆ ಎರಡು ತಲೆಳ್ಳ ಮರಿ ಜನನವಾಗಿದೆ. ಈ ಮರಿ ಸಂಪೂರ್ಣವಾಗಿ ಎರಡು ತಲೆಯುಳ್ಳದಾಗಿದ್ದು, ಅದೃಷ್ಟವಶಾತ್ ಸಂಪೂರ್ಣ ಆರೋಗ್ಯವಂತವಾಗಿದಿಂದ ಕೂಡಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಅಪರೂಪದ ಘಟನೆ ಗ್ರಾಮದಲ್ಲಿ ಕುತೂಹಲ ಉಂಟುಮಾಡಿದ್ದು, ಮೇಕೆಮರಿಯನ್ನು ನೋಡಲು ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಜನರು ಅವರ ಮನೆಯನ್ನು ಭೇಟಿ ನೀಡುತ್ತಿದ್ದಾರೆ. ಈ‌ಕುರಿತು ಸ್ಥಳೀಯ ವೈದ್ಯಾಧಿಕಾರಿಗಳ ಗಮನಕ್ಕೂ ಈ ಘಟನೆ ತಲುಪಿದ್ದು, ಮೇಕೆಮರಿಯ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ.
Read More News
T & CPrivacy PolicyContact Us