ಮದ್ದೂರು ತಾಲ್ಲೂಕು ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ 45 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಶಾಸಕ ಕೆ.ಎಂ.ಉದಯ್ ಅವರು ಶನಿವಾರ ಮಾತನಾಡಿ, ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಅವರು ತಿಳಿಸಿದರು. ಕ್ಷೇತ್ರದಲ್ಲಿ ಆಗಬೇಕಾಗಿರುವ ಕೆಲಸಗಳು ಬಹಳಷ್ಟಿದ್ದು, ಅವುಗಳನ್ನು ಹಂತಂತವಾಗಿ ಮಾಡಲು ಮುಂದಾಗಿದ್ದೇನೆ. ಭುಜುವಳ್ಳಿ ಗ್ರಾಮಕ್ಕೆ 20 ಲಕ್ಷ, ಕಪರೇಕೊಪ್ಪಲು ಗ್ರಾಮಕ್ಕೆ 25 ಲಕ್ಷ ಒಟ್ಟು 90 ಲಕ್ಷ ರೂ ವೆಚ್ಚದಲ್ಲಿ ಕಾಡುಕೊತ್ತನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ರಸ್ತೆ ಅಭಿವೃದ್ದಿಗೆ ಮುಂದಾಗಿದ್ದೇನೆ ಎಂದರು.