ಕಾರ್ಖಾನೆಗಳ ಕೇಂದ್ರೀಕರಣ ಹಾಗೂ ಕಾರ್ಖಾನೆಗಳ ವಿಸ್ತೀರ್ಣ ವಿರೋಧಿಸಿ ನಗರದ ಅಶೋಕ ವೃತ್ತದಲ್ಲಿ ಶನಿವಾರ ಮಧ್ಯಾಹ್ನ 3-30 ಗಂಟೆಗೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಹಶೀಲ್ ಕಛೇರಿಯ ಶಿರಸ್ತೇದಾರ್ ಮಹಾವೀರ್ ಅಳ್ಳಳ್ಳಿ ಅವರ ಮೂಲಕ ಮನವಿ ಸಲ್ಲಿಸಿ ಇಲ್ಲಿನ ಸಮಸ್ತ ಜನತೆ ಬಹು ದಿನಗಳಿಂದ ಕಾರ್ಖಾನೆಗಳ ಕೇಂದ್ರೀಕರಣ ಹಾಗೂ ಕಾರ್ಖಾನೆಗಳ ವಿಸ್ತೀರ್ಣ ವಿರೋಧಿಸಿ ನಿರಂತರ ಹೋರಾಟದಲ್ಲಿ ತೊಡಗಿದ್ದಾರೆ. ಈ ವಿಷಯವಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶಾಸಕ.ರಾಘವೇಂದ್ರ ತಿಳಿಸಲಾಗಿದೆ