ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿ ಮಳೆ ನೀರು ನಿಂತಿರುವ ಗುಂಡಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಚಂದು ಪಾಷಾ ತಂದೆ ಬಸೀರ್ ಅಹ್ಮದ್ ಎನ್ನುವ 42 ವರ್ಷದ ವ್ಯಕ್ತಿ ಶಹಪುರ್ ನಗರದ ಹಳೆಪೇಟೆಯ ರಾಘವೇಂದ್ರ ದೇವಸ್ಥಾನ ಹತ್ತಿರದ ನಿವಾಸಿಯಾಗಿದ್ದಾನೆ ಎಂದು ತಿಳಿದುಬಂದಿದೆ. ವ್ಯಕ್ತಿ ಒಂದು ಸ್ಥಳದಲ್ಲಿ ಬಂದು ಸಾವನ್ನಪ್ಪಿದ್ದು ಹೇಗೆ ಎನ್ನುವುದು ತಿಳಿದುಬಂದಿಲ್ಲ. ಸ್ಥಳಕ್ಕೆ ಶಹಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.