ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಇಂದು ನಿನ್ನೆಯದಲ್ಲ. ಮಳೆಗಾಲ ಆರಂಭವಾದರೆ ಸಾಕು ಗುಂಡಿಗಳಲ್ಲಿ ನಿಂತ ನೀರು ವಾಹನ ಸವಾರರ ಪರದಾಟಕ್ಕೆ ಕಾರಣವಾಗುತ್ತದೆ.ಇಂಥಹ ರಸ್ತೆ ಗುಂಡಿಗಳನ್ನ ಮುಚ್ಚಲು ಮುಂದಾಗದ ಇಲಾಖೆಯ ವಿರುದ್ಧ ಸರ್ವ ಸಂಘಟನೆಗಳು ಒಕ್ಕೂಟದ ಅಧ್ಯಕ್ಷ ಸಿ.ಎಂ ಶಿವಕುಮಾರ್ ನಾಯಕ್ ವಿನೂತನವಾಗಿ ಪ್ರತಿಭಟಿಸಿದರು. ಗುಂಡಿಮುಕ್ತ ಬೆಂಗಳೂರು ಅಭಿಯಾನದ ಅಂಗವಾಗಿ ಸೆಪ್ಟೆಂಬರ್ 7ರಂದು ಬೆಳಿಗ್ಗೆ 10 ಗಂಟೆಗೆ ಚಡ್ಡಿ ಬನಿಯನ್ ಧರಿಸಿ ಕಾರಿನ ಮೇಲೆ ಕುಳಿತು ಮೈಸೂರು ರಸ್ತೆಯಿಂದ ಜೆಪಿ ನಗರದವರೆಗೆ ತೆರಳಿ ಆಕ್ರೋಶ ಹೊರಹಾಕಿದರು