ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಂಬಂಧಿಸಿ ಡಿಸಿಎಂ ಡಿಕೆ.ಶಿವಕುಮಾರ್ ಅವರು ಜಂಟಿ ಸುದ್ದಿಗೋಷ್ಟಿಯನ್ನ ಮಂಗಳವಾರ ರಾತ್ರಿ 7 ಗಂಟೆ ಸುಮಾರಿಗೆ ವಿಧಾನಸೌಧದ ಕಮಿಟಿ ಕೊಠಡಿಯಲ್ಲಿ ನಡೆಸಿ ಮಾತನಾಡಿ, 15/೫/೨೫ ರಿಂದ ಅಧಿನಿಯಮ ಜಾರಿಗೆ ಬಂದಿದೆ. ಐದು ಪಾಲಿಕೆಗಳಾಗಿ ವರ್ಗೀಕರಿಸಲಾಗಿದೆ. ಸಿಎಂ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ರಚನೆಯಾಗಿದೆ. 75 ಮಂದಿ ಜನಪ್ರತಿನಿಧಿಗಳು ಸದಸ್ಯರಿದ್ದಾರೆ. ಇಂದಿನಿಂದ ಐದು ಪಾಲಿಕೆ ಅಸ್ತಿತ್ವಕ್ಕೆ ಬಂದಿವೆ. ಇದರಿಂದ ಜನರ ಹತ್ತಿರ ಆಡಳಿತ ಹೋಗಲು ಸಹಕಾರಿಯಾಗಿದೆ. ಐದು ಪಾಲಿಕೆಗೆ ಆಯುಕ್ತರು,ಹೆಚ್ಚುವರಿ ಆಯುಕ್ತರ ನೇಮಕ ಮಾಡಲಾಗಿದ್ದು, ಬೆಂಗಳೂರು ಕೇಂದ್ರ,ಉತ್ತರ,ದಕ್ಷಿಣ,ಪಶ್ಚಿಮ,ಪೂರ್ವ ಎಂದು ಇಟ್ಟಿದ್ದೇವೆ ಎಂದರು.