ಹನೂರು: ತಾಲೂಕಿನ ಕುರಟ್ಟಿಹೊಸೂರು ಗ್ರಾಮದಲ್ಲಿ ವಿಚಿತ್ರ ಅಂಟು ರೋಗದಿಂದ ಜಾನುವಾರುಗಳು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಕುರಟ್ಟಿಹೊಸೂರು ಗ್ರಾಮದ ರೈತ ಮುನಿಸಿದ್ದ ಶೆಟ್ಟಿ ಅವರಿಗೆ ಸೇರಿದ ಮೂರು ಕರುಗಳು ಈ ರೋಗಕ್ಕೆ ಬಲಿಯಾಗಿವೆ.ಈ ಅಂಟು ರೋಗವು ಜಾನುವಾರುಗಳಲ್ಲಿ ಗುಳ್ಳೆ ಮಾದರಿಯಲ್ಲಿ ಕಾಣಿಸಿಕೊಂಡು ಬೇಗನೆ ವ್ಯಾಪಿಸುತ್ತಿದ್ದು, ಕರುಗಳು ತೀವ್ರವಾಗಿ ಸಮಸ್ಯೆಗೆ ಒಳಗಾಗುತ್ತಿರುವುದು ಕಂಡುಬಂದಿದೆ. ರೈತರ ಹೇಳುವ ಪ್ರಕಾರ, ನಾಲ್ಕು ದಿನಗಳ ಹಿಂದೆ ಮತ್ತೊಂದು ಕರು ಕೂಡಾ ಇದೇ ರೋಗದಿಂದ ಸಾವನ್ನಪ್ಪಿದೆ.ರೋಗದ ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇನ್ನೂ ಹೆಚ್ಚು ಜಾನುವಾರುಗಳಿಗೆ ಈ ರೋಗ ಆವರಿಸಬಹುದೆಂಬ ಆತಂಕ ಗ್ರಾಮಸ್ಥರಲ್ಲಿ ಮನೆಮಾಡಿದೆ.