Download Now Banner

This browser does not support the video element.

ಅಕ್ರಮ ಭೂ ಒತ್ತುವರಿ ತೆರವಿಗೆ ಆಗ್ರಹಿಸಿ ಸಿಪಿಐನಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ‌.!

Kalasa, Chikkamagaluru | Sep 15, 2025
ಕಳಸ ತಾಲ್ಲೂಕು ಕೇಂದ್ರಕ್ಕೆ ಬೇಕಾದ ಭೂಮಿ ಇಲ್ಲ ಎಂದು ಕಂದಾಯ ಇಲಾಖೆ ಕೈಚೆಲ್ಲುತ್ತಿದೆ. ಆದರೆ ವಿವಿಧ ಇಲಾಖೆಗಳ ಕಚೇರಿಗಳಿಗೆ ಮತ್ತು ವಸತಿಗೃಹಕ್ಕೆ ಬೇಕಾದ 90 ಎಕರೆ ಭೂಮಿ ಪಟ್ಟಣಕ್ಕೆ ಹತ್ತಿರದ ಸರ್ವೆ ನಂಬರ್ 641ರಲ್ಲಿ ಇದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ತಿಳಿಸಿದೆ. ಕಂದಾಯ ಭೂಮಿ ಅತಿಕ್ರಮಣ ತಡೆದು ಜನರ ಉಪಯೋಗಕ್ಕೆ ಉಳಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ ಪಟ್ಟಣದಲ್ಲಿ ಸೋಮವಾರ ಧರಣಿ ನಡೆಸಿತು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿಪಿಐ ಕಾರ್ಯಕರ್ತರು ಮೆರವಣಿಗೆ ನಡೆಸಿ ಆನಂತರ ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿದರು.
Read More News
T & CPrivacy PolicyContact Us