ಹುನ್ನರಗಿ ಗ್ರಾಮ ಸೇರಿದಂತೆ ಕೆಲ ಪ್ರದೇಶಗಳಿಗೆ ನೀರು ನುಗ್ಗಿದ್ದ ಹಿನ್ನೆಲೆ ಜಾನುವಾರುಗಳ ಸುರಕ್ಷತ ಸ್ಥಳಕ್ಕೆ ರವಾನೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಮತ್ತು ಜಲಾಶಯಗಳಿಂದ ಬರುತ್ತಿರುವ ಭಾರಿ ಪ್ರಮಾಣದ ನೀರಿನಿಂದ ಕೃಷ್ಣಾ ನದಿಯ ಒಳಹರಿವು ಏರಿಕೆಯಾಗಿದೆ. ಇದರಿಂದಾಗಿ ಹುನ್ನರಗಿ ಗ್ರಾಮ ಸೇರಿದಂತೆ ಕೆಲ ಪ್ರದೇಶಗಳಿಗೆ ನೀರು ನುಗ್ಗಿದ್ದ ಹಿನ್ನೆಲೆ ಶನಿವಾರ ಗ್ರಾಮದ ಜನರು ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ದೂದಗಂಗಾ ಹಾಗೂ ವೇದಗಂಗಾ ನದಿಗಳು ತುಂಬಿ ಹರಿಯುತ್ತಿವೆ