ಶಿವಮೊಗ್ಗ ನಗರದ ಗೋವಿಂದಾಪುರ ಮತ್ತು ಗೋಪಿ ಶೆಟ್ಟಿ ಕೊಪ್ಪದಲ್ಲಿ ನಿವೇಶನ ರಹಿತರಿಗೆ ನೀಡಿದ ಕಚ್ಚಾ ಮನೆಯನ್ನು, ಪಕ್ಕಾ ಮನೆಯನ್ನಾಗಿ ಮಾಡಿಕೊಳ್ಳಲು ಮನೆ ಸಿಗದೇ ಇದ್ದವರು ಮನೆ ಪಡೆಯಲು ಫಲಾನುಭವಿಗಳು ಆಶ್ರಯ ಸಮಿತಿ ಕಚೇರಿಗೆ ದಿನನಿತ್ಯ ಅಲೆದಾಡುತ್ತಿದ್ದಾರೆ. ಸರ್ಕಾರ ಇನ್ನೂ ಸಂಪೂರ್ಣವಾಗಿ ಮನೆ ವಿತರಿಸಲು ವಿಫಲವಾಗಿದೆ.ಕೂಡಲೇ ಮನೆಗಳನ್ನ ವಿತರಿಸಿ ಎಲ್ಲಾ ಮೂಲಭೂತ ಸೌಲಭ್ಯ ಕಲ್ಪಿಸಿ ಪಂಚಾಯಿತಿಯಲ್ಲಿ 'ಬಿ' ಖಾತೆಯನ್ನು ಮಾಡಿ ಕೊಡಬೇಕೆಂದು ಒತ್ತಾಯಿಸಿ ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಮುಖ್ಯಸ್ಥ ಕಲ್ಲೂರು ಮೇಘರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಮನವಿ ಸಲ್ಲಿಸಿದರು.