ಶ್ರೀನಿವಾಸ್ ಅಲಿಯಾಸ್ ಶೀನಪ ಅಲಿಯಾಸ್ ಗಾಂಜಾ ಶೀನ ಎಂಬ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಈತ ಗಾಂಜಾ ಸರಬರಾಜು ಮಾಡುತ್ತಿದ್ದ ಮೈಸೂರು ಪೊಲೀಸರು ಮಾದಕದ್ರವ್ಯದ ವಿರುದ್ದ ನಿರಂತರ ಕಾರ್ಯಾಚರಣೆಯಿಂದ ಈತ ಮೈಸೂರು ಬಿಟ್ಟು ಪರಾರಿಯಾಗಿದ್ದ. ಈತನ ಪತ್ತೆಗೆ ವಿಶೇಷ ಪೊಲೀಸ್ ತಂಡರಚನೆ ಮಾಡಲಾಗಿತ್ತು. ಕಳೆದ 45 ದಿನಗಳಿಂದ ಈತನ ಪತ್ತೆಗಾಗಿ ಒಡಿಶಾ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿಗೆ ವಿವಿಧ ಶೋಧ ತಂಡಗಳನ್ನು ಕಳುಹಿಸಲಾಗಿತ್ತು. ಈ ಆರೋಪಿಯನ್ನು ಮೈಸೂರು ಬಳಿ ಬಂಧಿಸಲಾಗಿದೆ ಮತ್ತು ಆತನಿಂದ ಸುಮಾರು 14 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ ಮೈಸೂರಿನಲ್ಲಿ ಮಾದಕದ್ರವ್ಯ ಪತ್ತೆ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಹಾಗೂ ಆರೋಪಿಗಳ ವಿರುದ್ದ ಕ್ರಮ