ಸತತ 18 ದಿನಗಳಿಂದ ಬಗರಹುಕುಂ ಸಾಗುವಳಿದಾರರು, ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ಹಾಗೂ ನಾಗಾವಿ ಆರ್‌ಡಿಪಿಆರ್ ವಿಶ್ವ ವಿದ್ಯಾಲಯಕ್ಕೆ ಜಮೀನು ಕಳೆದುಕೊಂಡ ರೈತರು ಪರಿಹಾರ ಅಥವಾ ಪರ್ಯಾಯ ಜಮೀನಿಗೆ ಆಗ್ರಹಿಸಿ ಜಿಲ್ಲಾಡಳಿತದ ಎದುರು ನಿರಂತರ ಧರಣಿಗೆ ಕುಳಿತಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವರು ಸಮಸ್ಯೆ ಆಲಿಸದೆ ಇರುವುದರಿಂದ ಗುರುವಾರ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಡಳಿತ ಕಛೇರಿಯ ವರೆಗೆ ರೈತರು ಸಾಮೂಹಿಕ ದೀಡ್ ನಮಸ್ಕಾರ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.