ಮೈಸೂರು ದಸರಾ ಉದ್ಘಾಟಕರಾಗಿ ಸಾಹಿತಿ ಬಾನು ಮುಷ್ತಾಕ್ ಆಯ್ಕೆಯಾಗಿರುವುದಕ್ಕೆ ಕನ್ನಡ ಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಆಕ್ರೋಶ ಹೊರಹಾಕಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಭುವನೇಶ್ವರಿ ಹಾಗೂ ಅರಿಶಿಣ ಕುಂಕುಮದ ಬಗ್ಗೆ ಉಡಾಫೆ ಮಾತನ್ನಾಡಿದ್ದಾರೆ, ಬಾನು ಮುಷ್ತಾಕ್ ಮುಸ್ಲಿಂ ಸಮುದಾಯದವರೆಂದು ನಮ್ಮ ವಿರೋಧವಿಲ್ಲ, ಈ ಹಿಂದೆ ನಿಸಾರ್ ಅಹಮ್ಮದ್ ದಸರಾ ಉದ್ಘಾಟಿಸಿದ್ರು ಆಗ ನಾವು ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ ಎಂದರು.