ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಎಸ್ ಎನ್ ನಗರದ ಶಿವಪ್ಪ ನಾಯಕ ಯುವಜನಾ ಸಂಘ ಹಾಗೂ ಜೈ ಭುವನೇಶ್ವರಿ ಸಂಘದ ಗಣಪತಿ ವಿಸರ್ಜನೆ ಹಿನ್ನೆಲೆ ಸಾಗರ ಜನ್ನತ್ ನಗರ, ಎಸ್.ಎನ್.ನಗರ, ಶಿವಪ್ಪ ನಾಯಕ ವೃತ್ತ, ಎಕ್ಸ್ ಸರ್ಕಲ್ ಸೇರಿದಂತೆ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಎಎಸ್ಪಿ ಡಾ. ಬೆನಕ ಪ್ರಸಾದ್, ಇನ್ಸ್ಪೆಕ್ಟರ್ ಪುಲ್ಲಯ್ಯ ರಾತೋಡ್, ಪಿ ಐ ನಾಗರಾಜ್,ಯಲ್ಲಪ್ಪ ಸೇರಿದಂತೆ ಹಲವರು ಶುಕ್ರವಾರ ತಪಾಸಣೆಯನ್ನು ನಡೆಸಿದರು.