ಮದ್ದೂರ ಗಣೇಶೋತ್ಸವದಲ್ಲಿ ಕಲ್ಲು ತೂರಾಟ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾವೇರಿ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ದೊಡ್ಡಮಟ್ಟದ ಗಣೇಶ ಬಿಡುಬೇಕಾದ್ರೆ ಚಿಕ್ಕ ಮಕ್ಕಳು ಉಗಿದಿದ್ದಾರೆ. ಇದರ ಮಾಹಿತಿ, ಸಾಕ್ಷಿ ಸಿಕ್ಕಿದೆ, ಹೀಗಾಗಿ ಮಕ್ಕಳು, ತಂದೆ ತಾಯಿ ಕರೆದು ಮೀಟಿಂಗ್ ಮಾಡಿದ್ದೇವೆ. ಯಾವುದೇ ಧರ್ಮದ ಬಗ್ಗೆ ಅಪಮಾನ ಮಾಡಿದ್ರೆ ಯಾರನ್ನು ಬಿಡಲು ಆಗಲ್ಲ. ಮಕ್ಕಳನ್ನು ಕರೆದುಕೊಂಡು ಬಂದು ಎಸ್‌ಪಿ ನೇತೃತ್ವದಲ್ಲಿ ಸಭೆ ಮಾಡಿದ್ದಾರೆ. ಈ ಕೆಲಸವನ್ನ ಐದು ವರ್ಷದ ಮಕ್ಕಳು ಮಾಡಿದ್ದಾರೆ. ಸಂಬಂಧಿಸಿದವರ ತನಿಖೆ ಆಗಬೇಕು, ಅವರ ಪ್ರಚೋದನೆ ಆಗಿದ್ಯಾ ಎನ್ನೋದು ತನಿಖೆ ಆಗಬೇಕು. ಅವರ ತಾಯಿ ಕ್ಷಮೆ ಕೇಳಿದ್ದಾರೆ, ಮುಖಂಡರು ಕೂಡ ಕ್ಷಮೆ ಕೇಳಿದ್ದಾರೆ.