ಚಿತ್ರದುರ್ಗದ ಹಿಂದೂ ಮಹಾ ಗಣಪತಿ ಸಮಿತಿ ವತಿಯಿಂದ ಇಂದು ನೃತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಶ್ರೀ ಗಾಯಿತ್ರಿ ನಾಟ್ಯಕಲಾ ಕೇಂದ್ರದ ವತಿಯಿಂದ ವಿಶೇಷ ನೃತ್ಯ ಪ್ರದರ್ಶನ ಹಮ್ಮಿಕೊಂಡಿದ್ದು 22 ಮಕ್ಕಳಿಂದ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಷ್ಟೇ ಅಲ್ಲದೆ ಗಾಯಿತ್ರಿ ನಾಟ್ಯಕಲಾ ಕೇಂದ್ರದಿಂದ ತರಗತಿ ಪ್ರಾರಂಭವಾಗಿ ಕೇವಲ 6 ತಿಂಗಳಿಗೆ ನೃತ್ಯ ಕಲಿತ ಮಕ್ಕಳು ಹಿಂದೂ ಮಹಾ ಗಣಪತಿ ಸಮಿತಿಯ ವತಿಯಿಂದ ಸಿಂದೂರ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನಡೆಸಿ ಕೊಟ್ಟಿದ್ದಾರೆ