ಧರ್ಮಸ್ಥಳದ ವಿಚಾರದಲ್ಲಿ ಕುತಂತ್ರಿಗಳು ನಡೆಯುತ್ತಿರುವ ಅಪಪ್ರಚಾರದ ನಡುವೆ, ನಗರದ ಹನುಮಂತಪ್ಪ ವೃತ್ತದಲ್ಲಿ ರಾತ್ರೋರಾತ್ರಿ ಅದ್ಭುತವಾದ ಧರ್ಮಸ್ಥಳ ಮಹಾದ್ವಾರ ನಿರ್ಮಾಣಗೊಂಡಿದೆ. ನಗರದ ಹೃದಯಭಾಗದಲ್ಲಿ ನಿರ್ಮಾಣಗೊಂಡಿರುವ ಈ ಮಹಾದ್ವಾರವು ಧರ್ಮಸ್ಥಳದ ಭಕ್ತರ ಭಾವನೆಗಳಿಗೆ ಮತ್ತೊಂದು ಹೊಸ ಶಕ್ತಿ ತುಂಬಿದಂತಾಗಿದೆ. ಹಿಂದೂ ಮಹಾಗಣಪತಿ ಸೇವಾ ಸಮಿತಿಯ ಮುಂದಾಳತ್ವದಲ್ಲಿ ಈ ಮಹಾದ್ವಾರದ ಮೂಲಕ ಗಣಪತಿ ಪ್ರತಿಷ್ಠಾಪನೆ ಮಾಡಲು ನಿರ್ಧರಿಸಲಾಗಿದೆ.