ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರ ದಾಳಿ ಏಳು ಜನರ ಬಂಧನ ಶ್ರೀನಿವಾಸಪುರ : ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಆಡುತ್ತಿದ್ದಂತಹ 7 ಜನ ಆರೋಪಿಗಳನ್ನು ಶ್ರೀನಿವಾಸಪುರ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಪೆಗಳಪಲ್ಲಿ ಗ್ರಾಮದ ಕೆರೆಯ ಅಂಗಳದಲ್ಲಿ ಇಸ್ಪೀಟ್ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಶ್ರೀನಿವಾಸಪುರ ಪೊಲೀಸ್ ಇನ್ಸ್ಪೆಕ್ಟರ್ ಗೊರವನಕೊಳ್ಳ, ಸಬ್ ಇನ್ಸ್ಪೆಕ್ಟರ್ ಜಯರಾಮ್ ನೇತೃತ್ವದಲ್ಲಿ ಪೇದೆಗಳಾದ ರಾಜು, ಆನಂದ್ ಕುಮಾರ್,ನಾಗರಾಜ್, ಮಂಜುನಾಥ್, ವಾಸು, ಮುರಳಿ,ಸಂತೋಷ್ ಕುಮಾರ್, ಚಂದ್ರಶೇಖರ್ ರ ತಂಡದೊಂದಿಗೆ ದಾಳಿ ಮಾಡಿ 7 ಜೂಜು ಆಟ ಗಾರರನ್ನು ಬಂಧಿಸಿ 14,100 ರೂಪಾಯಿ ಹಣವನ್ನೂ ಸಹಾ ವಶಕ್ಕೆ ಪ