ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಜೀವಪರ ಕಾಳಜಿಯನ್ನು ನಾವು ಅದೇಷ್ಟು ಸ್ಮರಿಸಿದರು ಕಡಿಮೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಬಸವರಾಜ್ ಶೀಲವಂತರ್ ಹೇಳಿದರು. ಸೆಪ್ಟೆಂಬರ್ 08 ರಂದು ಸಂಜೆ 4-30 ಗಂಟೆಗೆ ನಗರದ ಹಟಗಾರ ಪೇಟೆ ಬಡಾವಣೆಯಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1500 ನೇ ಜನ್ಮದಿನದ ಅಂಗವಾಗಿ ಭ್ರಾತೃತ್ವ ಸಮಿತಿಯಿಂದ ನಡೆದ ಪ್ರವಾದಿಯವರ ಸೌಹಾರ್ದ ಸಂದೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಸವರಾಜ್ ಶೀಲವಂತರ್ ಅವರು ಮುಂದುವರೆದು ಮಾತನಾಡಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು, ಮೌಡ್ಯತೆ ಹಾಗೂ ಜಾತಿಯತೆ ಅಳಿಯಬೇಕು