ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಚಿತ್ರದುರ್ಗ ಬೆಸ್ಕಾಂ ಇಲಾಖೆ ಇಇ ಬಿದ್ದಿದ್ದಾರೆ. 3.5 ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ EE ತಿಮ್ಮರಾಯಪ್ಪ ಸಿಕ್ಕಿ ಬಿದ್ದಿದ್ದಾರೆ. ಬೆಸ್ಕಾಂ ಕಂಟ್ರಾಕ್ಟರ್ ಬಳಿ 35 ಲಕ್ಷ ಟೆಂಡರ್ ಗೆ 10 % ಲಂಚಕ್ಕೆ ಬೇಡಿಕೆ ಇಇ ತಿಪ್ಪರಾಯಪ್ಪ, ಲಂಚಕ್ಕೆ ಬೇಡಿಕೆ ಇಟ್ಟ ಕುರಿತು ಬೆಸ್ಕಾಂ ಕಂಟ್ರಾಕ್ಟರ್ ಸಂಜಯ್ ದೂರು ದಾಖಲು ಮಾಡಿದ್ದರು. ಸಂಜಯ್ ನೀಡಿದ ದೂರು ಆಧರಿಸಿ ನಿನ್ನೆ ರಾತ್ರಿ ತಿಮ್ಮರಾಯಪ್ಪ ವಿರುದ್ದ ಲೋಕಾಯುಕ್ತ ಅಧಿಕಾರಿಗಳು FIR ದಾಖಲು ಮಾಡಿದ್ದರು. ಚಿತ್ರದುರ್ಗ ಲೋಕಾಯುಕ್ತ ಎಸ್ಪಿ ವಾಸುದೇವರಾಂ ನೇತೃತ್ವದಲ್ಲಿ ರೆಡ್ ಆ್ಯಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.