ಕೃಷಿಹೊಂಡದಲ್ಲಿ ಇಬ್ಬರ ಶವಪತ್ತೆಯಾದ ಧಾರುಣ ಘಟನೆ ಹನೂರು ತಾಲೂಕಿನ ಒಡೆಯರಪಾಳ್ಯ ಸಮೀಪ ಭಾನುವಾರ ಬೆಳಗ್ಗೆ ನಡೆದಿದೆ. ಹನೂರು ತಾಲೂಕಿನ ಒಡೆಯರಪಾಳ್ಯ ಗ್ರಾಮದ ವಿವಾಹಿತ ಮಹಿಳೆ ಮೀನಾಕ್ಷಿ ಹಾಗೂ ಅವಿವಾಹಿತ ವ್ಯಕ್ತಿ ರವಿ ಮೃತ ದುರ್ದೈವಿಗಳು. ಇವರಿಬ್ಬರು ಒಡೆಯರ ಪಾಳ್ಯ ನಿವಾಸಿಗಳಾಗಿದ್ದು ವಿವಾಹೇಯರ ಸಂಬಂಧ ಇರಿಸಿಕೊಂಡಿದ್ದರು ಎನ್ನಲಾಗುತ್ತಿದೆ. ಸ್ಥಳಕ್ಕೆ ಹನೂರು ಪೊಲೀಸರು ಭೇಟಿಕೊಟ್ಟು ಮೃತದೇಹಗಳನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ರವಾನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.