ಪಾಕ್ ಪರ ಘೋಷಣೆ ಆರೋಪ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು. ಮುಸ್ಲಿಂ ಮುಖಂಡರು ಇದಕ್ಕೆ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಈದ್ ಮಿಲಾದ್ ಅಂಗವಾಗಿ ತರೀಕೆರೆ ಪಟ್ಟಣವನ್ನ ಅಲಂಕಾರಗೊಳಿಸುವ ಸಂದರ್ಭದಲ್ಲಿ ಕೋಡಿ ಕ್ಯಾಂಪ್ ಸರ್ಕಲ್ ನಲ್ಲಿ ಕೆಲ ಯುವಕರು ಯಾಸಿಂದ ಕಿ ಜೈ ಎನ್ನುವಂತೆ ಕೇಳಿಸಿದೆ. ನಾವು ಭಾರತಾಂಬೆಯ ಮಕ್ಕಳು ನಾವು ಹುಟ್ಟಿರೋದು ಇಲ್ಲೇ ಸಾಯೋದು ಕೂಡ ಇಲ್ಲೇ ಪಾಕಿಸ್ತಾನ ಪರ ಯಾರು ಘೋಷಣೆ ಕೂಗಿಲ್ಲ ನಾವು ಯಾವತ್ತಿದ್ರೂ ಭಾರತದ ಮಕ್ಕಳು ಎಂದು ಮುಸ್ಲಿಂ ಮುಖಂಡರು ಸ್ಪಷ್ಟನೆ ಕೊಟ್ಟಿದ್ದಾರೆ.