ಇಂದಿನ ಆಧುನಿಕ ಯುಗದಲ್ಲಿ ಸಾಂಪ್ರದಾಯಕ ಎಲ್ಲ ಕಾರ್ಯಕ್ರಮಗಳು ನಶಿಸಿ ಹೋಗುತ್ತಿವೆ. ಡಿ.ಜೆ, ಆರ್ಕೆಷ್ಟ್ರಾ ಹೀಗೆ ನಾನಾ ತರದ ಸಂಗೀತ ಯುಗದಲ್ಲಿ ಕೃತಪುರ ಸೇವಾ ಸಮಿತಿ ಸದಸ್ಯರು ದಶಕಗಳಿಂದ ಸಾಗಿ ಬಂದಿಸುರವ ಭಜನಾ ಕಲೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೌದು..ನಗರದ ಶ್ರೀ ಶಿರಡಿ ಸಾಯಿ ಬಾಬಾ ದೇವಸ್ಥಾನದ ಹತ್ತಿರ ಪ್ರತಿಷ್ಠಾಪಿಸಿರುವ ವಿಘ್ನೇಶ್ವರನ ಎದುರು ಸತತ 21 ಗಂಟೆಗಳ ಕಾಲ ಭಜನಾ ಸೇವೆ ಸಲ್ಲಿಸಲಾಗಿದೆ. ಇದರಿಂದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.