ವಾಹನ ಸವಾರರಿಗೆ ಹುಲಿ ರಸ್ತೆ ದಾಟುವುದನ್ನು ಕಂಡು ಬೆಚ್ಚಿ ಬಿದ್ದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿಯ ಮಹದೇಶ್ವರ ದೇಗುಲ ಸಮೀಪ ನಡೆದಿದ್ದು ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಗ್ರಾಪಂ ಸದಸ್ಯ ಗೋವಿಂದ್, ನಂದೀಶ್ ಸೇರಿ ಹಲವರು ಬೈಕ್ ನಲ್ಲಿ ಬೊಮ್ಮಲಾಪುರಕ್ಕೆ ತೆರಳುವಾಗ ಹುಲಿ ಎದುರಾದ ಘಟನೆ ನಡೆದಿದೆ. ಕಳೆದ ಹಲವು ದಿನಗಳಿಂದ ಬೊಮ್ಮಲಾಪುರ ಸೇರಿ ವಿವಿಧ ಗ್ರಾಮಗಳಲ್ಲಿ ಉಪಟಳ ಕೊಡುತ್ತಿರುವ ಹುಲಿ ಇದೆ ಆಗಿರಬಹುದು ಎಂಬ ಶಂಕೆಯೂ ಸ್ಥಳೀಯರಲ್ಲಿ ವ್ಯಕ್ತವಾಗಿದೆ.