ನಗರದಲ್ಲಿ ಜಿಲ್ಲಾ ಬಿಜೆಪಿ ನಿಯೋಗದ ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ್, ನಿಕಟಪೂರ್ವ ಲೋಕಸಭಾ ಅಭ್ಯರ್ಥಿಯಾದ ಡಾ. ಬಸವರಾಜ ಕ್ಯಾವಟರ್ ಇವರ ನೇತೃತ್ವದಲ್ಲಿ ಅಕ್ರಮ ಮರಳು ದಂದೆ ತಡೆಯಲು ಒತ್ತಾಯಿಸಿ ಎಸ್ ಪಿ ಗೆ ಮನವಿ ನೀಡಿದ್ದಾರೆ. ಸೆಪ್ಟೆಂಬರ್ 10 ರಂದು ಮಧ್ಯಾಹ್ನ 1-30 ಗಂಟೆಗೆ ಜಿಲ್ಲಾ ಮುಖಂಡರು, ಕಾರ್ಯಕರ್ತರು ಅಕ್ರಮ ಮರಳು ದಂಧೆಯನ್ನು ತಡೆಗಟ್ಟಲು ಮತ್ತು ಅಧಿಕೃತ ಮರಳು ಕೇಂದ್ರಗಳನ್ನು ತೆರೆದು ಅನಧಿಕೃತ ಮರಳು ಅಡ್ಡೆಗಳನ್ನು ಸಂಪೂರ್ಣ ಕಡಿವಾಣ ಹಾಕಲು ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು