ಕೆಲಸ ಮಾಡದ ಅಧಿಕಾರಿಗಳನ್ನ ಕೊಲೆ ಮಾಡಿ ಜೈಲಿಗೆ ಹೋಗಲು ಸಿದ್ದ ಎನ್ನುತ್ತಿದ್ದಾರೆ ಇಲ್ಲೊಬ್ಬ ರೈತ.ಕೋಲಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಸರ್ಕಾರಿ ಕಾಲುದಾರಿ ಒತ್ತುವರಿ ತೆರವಿಗಾಗಿ ರೈತ ನಾರಾಯಣಸ್ವಾಮಿಯಿಂದ ಸತತವಾಗಿ ಹೋರಾಟ ಮಾಡುತ್ತಿದ್ದು,8 ಅಡಿ ರಸ್ತೆ ತೆರವಿಗಾಗಿ ಕಳೆದ 8 ವರ್ಷದಿಂದ ತಾಲ್ಲೂಕು ಕಚೇರಿಗೆ ಅಲೆಯುತ್ತಿದ್ದು,ಹೈಕೋರ್ಟ್, ಲೋಕಾಯುಕ್ತ, ಡಿಸಿ, ಎಸಿ, ತಹಶಿಲ್ದಾರ್, ತಾಲ್ಲೂಕು ಕಚೇರಿಯ ಅಧಿಕಾರಿಗಳ ಬಳಿ ಅಲೆದು ಅಲೆದು ಸುಸ್ತಾಗಿದೆ ಎಂದು ಶುಕ್ರವಾರ ತಮ್ಮ ಅಳಲನ್ನು ತೋಡಿಕೊಂಡ್ರು.ಸರ್ಕಾರದ ಎಲ್ಲಾ ದಾಖಲೆಗಳು ಪರವಾಗಿ ಇದ್ದರೂ ಅಧಿಕಾರಿಗಳು ತೆರವು ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ.ಚಂದ್ರಪ್ಪ, ನಾರಾಯಣಸ್ವಾಮಿ, ರಮೇಶ್, ಚೌಡಪ್ಪ ಎಂಬುವರಿಂದ ರಸ್ತೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದ್ರು