ನೆರೆಯ ಕೇರಳಕ್ಕೆ ಗುಂಡ್ಲುಪೇಟೆ ಪಟ್ಟಣದ ಮೂಲಕ ಅನಧಿಕೃತವಾಗಿ ಖನಿಜ ಮತ್ತು ನಿರ್ಮಾಣ ಸಾಮಾಗ್ರಿ ಸಾಗಿಸುತ್ತಿದ್ದ 13 ಟಿಪ್ಪರ್‌ಗಳನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಟಿಪ್ಪರ್‌ಗಳಲ್ಲಿ ಕೆಲವು ನೆರೆಯ ಕೇರಳ ರಾಜ್ಯಕ್ಕೆ ನಿರ್ಮಾಣ ಸಾಮಾಗ್ರಿ ಸಾಗಣೆ ಮಾಡುತ್ತಿದ್ದವು. ಇನ್ನೂ ಕೆಲವು ಕ್ರಷರ್‌ಗಳಿಗೆ ಕಪ್ಪುಶಿಲೆ ಬೋಡ್ರಸ್ ಅನ್ನು ಸಾಗಿಸುತ್ತಿದ್ದವು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಪಟ್ಟಣದ ಹೊರ ವಲಯದ ಕ್ಯಾಲಿಕಟ್ ರಸ್ತೆಯಲ್ಲಿ ಠಾಣಾ ಸಿಬ್ಬಂದಿಗಳೊಂದಿಗೆ ಟಿಪ್ಪರ್‌ಗಳನ್ನು ತಡೆದು ಪರಿಶೀಲಿಸಿದಾಗ ಭಾರ ಮಿತಿ ಉಲ್ಲಂಘನೆ ಮತ್ತು ಯಾವುದೇ ಪರವಾನಗಿ ಇಲ್ಲದಿರುವುದು ಕಂಡು ಬಂದಿದೆ. ಮುಂದಿನ ಕ್ರಮಕ್ಕಾಗಿ ಟಿಪ್ಪರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.