ನಗರದಲ್ಲಿ ಶೃದ್ಧಾ ಭಕ್ತಿಯಿಂದ ಗಣೇಶನನ್ನು ಬರಮಾಡಿಕೊಂಡ ಭಕ್ತರು. ನಗರದ ಗಣಪತಿ ಗಲ್ಲಿ, ಶಹಾಪುರ, ಕಾಕತಿವೇಸ್ ಗಲ್ಲಿ, ಕಡೋಲ್ಕರ್ ಗಲ್ಲಿಯಲ್ಲಿ ಪರಿಸರ ಸ್ನೇಹಿ ಗಣಪತಿಯನ್ನು ಹಿಡಿದು ವಿಘ್ನನಿವಾರಕ ವಿನಾಯಕನಿಗೆ ಜೈ ಘೋಷ ಹಾಕಿಕೊಂಡು ಭಕ್ತರು ಗಣೇಶನನ್ನು ತಮ್ಮ ತಮ್ಮ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದರು. ಗಣೇಶ ಚತುರ್ಥಿ ಪ್ರಯುಕ್ತ ಜಿಲ್ಲಾದ್ಯಂತ ಜನರು ವಿಘ್ನನಿವಾರಕ ಗಣೇಶನನ್ನು ಬುಧವಾರ ನಗರದಲ್ಲಿ ಸಡಗರ ಸಂಭ್ರಮದಿಂದ ಬರಮಾಡಿಕೊಂಡು ಶ್ರದ್ಧಾಭಕ್ತಿಯಿಂದ ಪೂಜಿಸಿ ತಮ್ಮ ಮನೆಯಲ್ಲಿ ಇಂದು ಪ್ರತಿಷ್ಠಾಪನೆ ಮಾಡಿದರು