ಹನೂರು:ಹನೂರು ಪಟ್ಟಣದಲ್ಲಿ ಗಣೇಶ ಚತುರ್ಥಿಯ ನಿಮಿತ್ತ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿತ ಗಣೇಶ ಮೂರ್ತಿಗಳ ವಿಸರ್ಜನೆಗೆ ತಾತ್ಕಾಲಿಕ ಹೊಂಡವನ್ನು ನಿರ್ಮಿಸಲಾಗಿದ್ದು, ಹನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅವರು ಮಾತನಾಡಿಪರಿಸರ ಸ್ನೇಹಿ ವಿಸರ್ಜನೆಯು ಇಂದಿನ ಅವಶ್ಯಕತೆ. ಸಾರ್ವಜನಿಕರು ಹನೂರಿನ ತಹಶಿಲ್ದಾರ್ ಕಚೇರಿ ಬಳಿ ನಿರ್ಮಿಸಿರುವ ಈ ತಾತ್ಕಾಲಿಕ ಹೊಂಡದ ಮೂಲಕ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು. ನದಿ-ನಾಲೆಗಳಲ್ಲಿ ವಿಸರ್ಜನೆ ತಡೆಯಲಾಗುವುದು. ಎಲ್ಲರೂ ಸಹಕಾರ ನೀಡಬೇಕು," ಎಂದು ಹೇಳಿದರು