ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಹೆಚ್ಚಾಗಿದೆ. ಬಿಂಬಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೊಸನಗರ ತಾಲೂಕಿನ ಅಂಗನವಾಡಿ ಹಾಗೂ ಪಿ ಯು ಕಾಲೇಜುಗಳಿಗೆ ಅನ್ವಯವಾಗುವಂತೆ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರು ರಜೆಯನ್ನು ಘೋಷಿಸಿದ್ದಾರೆ. ಮಕ್ಕಳ ಹಿತ ದೃಷ್ಟಿಯಿಂದಾಗಿ ಮಳೆ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರುವ ಕುರಿತಾಗಿ ಮಾಹಿತಿಯು ಗುರುವಾರ ಸಂಜೆ ಪ್ರಕಟಣೆ ಮೂಲಕ ತಿಳಿದು ಬಂದಿದೆ.