ರಾಯಚೂರು ನಗರದಲ್ಲಿ ಮಂಗಳಮುಖಿಯರ ಕಾಟ ತೀವ್ರವಾಗಿದ್ದು, ವಿವಿಧ ಅಂಗಡಿಗಳಿಗೆ ನುಗ್ಗುವ ಮಂಗಳಮುಖಿಯರು 500 ರಿಂದ 1 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಇದನ್ನು ತಪ್ಪಿಸಬೇಕು ಎಂದು ನಗರದ ಉದ್ಯಮಿ ಸುಧೀರ್ ಅವರು ಸೆಪ್ಟೆಂಬರ್ 12ರ ಶುಕ್ರವಾರ ಸಂಜೆ 4 ಗಂಟೆಗೆ ಪಬ್ಲಿಕ್ ಆಪ್ ಜೊತೆ ಮಾತನಾಡಿ ಒತ್ತಾಯಿಸಿದ್ದಾರೆ. ನಗರದ ಸ್ಟೇಷನ್ ರಸ್ತೆಯಲ್ಲಿರುವ ಹೋಟೆಲ್ ಒಂದಕ್ಕೆ ನುಗ್ಗಿದ ಮಂಗಳಮುಖಿಯರು 500 ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಆಗ ಅಷ್ಟೊಂದು ಹಣ ಕೊಡಲು ಒಪ್ಪದ ಕೆಲಸಗಾರರ ಜೊತೆ ಮಾತಿಗೆ ಇಳಿದು ಬಾಯಿಗೆ ಬಂದಂತೆ ಬೈದಿದ್ದಾರೆ. ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಅದರ ಜೊತೆಗೆ ಮಂಗಳಮುಖಿಯರ ವೇಷದಲ್ಲಿ ಬೇರೆ ಯಾರಾದರೂ ನಗ