ದೊಡ್ಡಬಳ್ಳಾಪುರ: ಇತ್ತೀಚೆಗೆ ಸುರಿದ ಮಳೆಗೆ ಮನೆಯೊಂದು ನೆಲಕ್ಕೆ ಉರುಳಿಬಿದ್ದಿರುವ ಘಟನೆ ತಾಲ್ಲೂಕಿನ ನೇರಳೇಘಟ್ಟದಲ್ಲಿ ನಡೆದಿದೆ.ಗ್ರಾಮದ ರಾಜ್‌ಕುಮಾರ್ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಮಳೆಯ ರಭಸಕ್ಕೆ ಮನೆಯ ಒಂದು ಭಾಗ ಸಂಪೂರ್ಣ ನೆಲಕಚ್ಚಿದೆ. ಇದರೊಂದಿಗೆ ಜೀವನಕ್ಕೆ ಇದ್ದ ಒಂದು ಸೂರು ಕಳೆದುಕೊಂಡು ಕಂಗಾಲಾಗಿದ್ದಾರೆ. ಮನೆ ಉರುಳಿ ಬಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇಲ್ಲದಿದ್ದ ಕಾರಣ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದ್ದು, ಮನೆಯಲ್ಲಿದ್ದ ವಸ್ತುಗಳು ಹಾನಿಗಳಗಾಗಿದೆ. ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಪರಿಹಾರ