ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ಅವರು ಸೆಪ್ಟೆಂಬರ್ 13ರಂದು ಬೆಳಿಗ್ಗೆ 11 ಗಂಟೆಗೆ ಮೆಜೆಸ್ಟಿಕ್ ಬಳಿಯ ಪಾದಚಾರಿ ಮಾರ್ಗವನ್ನು ಸ್ವಯಂಸೇವಕರ ಸಹಕಾರದೊಂದಿಗೆ ಸೇರಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಭಾಗಿಯಾದರು. ಬಳಿಕ ಸ್ವಯಂ ಸೇವಕರೊಂದಿಗೆ ಕುಳಿತು ಉಪಹಾರ ಸೇವಿಸಿದರು. ನಗರದ ಪಾದಚಾರಿ ಮಾರ್ಗಗಳನ್ನ ಸ್ವಚ್ಛ-ಸುಂದರಗೊಳಿಸಿ ನಾಗರಿಕ ಸ್ನೇಹಿಯಾಗಿಸುವುದು ರಾಜ್ಯ ಸರ್ಕಾರ ಹಾಗೂ ನಗರಪಾಲಿಕೆಯ ಪ್ರಮುಖ ಆದ್ಯತೆ ಆಗಿದೆ. ಆದರೆ ಅದಕ್ಕೆ ನಾಗರಿಕರು ಕೂಡಾ ಕೈ ಜೋಡಿಸಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ.ಎಲ್ಲಾ ನಾಗರಿಕರು ಸ್ವಚ್ಛತೆ ಕಾಪಾಡುವುದು ಅತ್ಯಗತ್ಯ ಎಂದು ಅವರು ತಿಳಿಸಿದರು.