ಶ್ರಮಪಟ್ಟು ದುಡಿದರೇ ಮಾತ್ರ ಜೀವನ ಸುಖವಾಗಿರುತ್ತದೆ ಎಂದು ಬಂಡಿವಾಡ ಗಿರೀಶ ಆಶ್ರಮದ ಎ.ಸಿ.ವಾಲಿ ಗುರೂಜಿ ಹೇಳಿದರು. ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಏಕದಂತ ಯವಕ ಮಂಡಳ ವತಿಯಿಂದ ಬುಧವಾರ ರಾತ್ರಿ 8 ಗಂಟೆಗೆ ಹಮ್ಮಿಕೊಂಡಿರುವ ಗಣೇಶನ ಪೂಜಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯ ಆಲಸ್ಯ ಬಿಟ್ಟು ದುಡಿಯಬೇಕು. ಉತ್ತಮ ಜೀವನ ಕಟ್ಟಿಕೊಳ್ಳಲು ಪ್ರಯತ್ನ ಮಾಡಬೇಕು ಎಂದರು.