ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಚಿಕ್ಕಮಗಳೂರು ನಗರದ ಸುಪ್ರಸಿದ್ಧ ಹಿಂದೂ ಮಹಾ ಗಣಪತಿ ಬುಧವಾರ 11 ಸುಮಾರಿಗೆ ಪ್ರತಿಷ್ಠಾಪನೆಗೊಂಡಿದೆ. ಪ್ರತಿ ವರ್ಷದಂತೆ ನಗರದಲ್ಲಿ ಪ್ರತಿಷ್ಠಾಪಿಸಲ್ಪಡುವ ಹಿಂದೂ ಮಹಾ ಗಣಪತಿಯನ್ನು ಸಾವಿರಾರು ಮುಖಂಡರು ಹಾಗೂ ಸ್ಥಳೀಯರು ಗಣಪತಿಯನ್ನು ವಿಶೇಷ ಪೂಜೆಯ ಮೂಲಕ ಆಹ್ವಾನಿಸಿದರು. ಅಷ್ಟೇ ಅಲ್ಲದೆ ಇಡೀ ರಾಜ್ಯದಲ್ಲೇ ಈ ಬಾರಿ ನಗರದ ಹಿಂದೂ ಮಹಾಗಣಪತಿ ಗಮನ ಸೆಳೆಯುತ್ತಿದ್ದು, ನಗರದ ಹನುಮಂತಪ್ಪ ವೃತದಲ್ಲಿ ಧರ್ಮಸ್ಥಳ ಮುಖ್ಯದ್ವಾರ ಎಂದು ಹೆಸರಿಟ್ಟಿರುವುದು ಕೇಂದ್ರಬಿಂದುವಾಗಿ ಪರಿಣಮಿಸಿದೆ.