ಮನೆಯ ಪಕ್ಕದ ಶೆಡ್ಡ್ ನಲ್ಲಿ ಕಟ್ಟಿಹಾಕಲಾಗಿದ್ದ ಮೇಕೆಗಳನ್ನ ಕಳ್ಳರು ಕಳ್ಳತನ ಮಾಡಿರುವ ಘಟನೆ ಮಾಗಡಿ ತಾಲೂಕಿನ ಗವಿನಾಗಮಂಗಲ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾಗರಾಜು ಅವರಿಗೆ ಸೇರಿದ 3 ಮೇಕೆಗಳನ್ನ ಕಳವು ಮಾಡಲಾಗಿದೆ. ತೋಟದಿಂದ ಮೇಯಿಸಿಕೊಂಡು ಸಂಜೆ ಶೆಡ್ಡ್ ನಲ್ಲಿ ಕಟ್ಟಿ ಹಾಕಲಾಗಿತ್ತು. ರಾತ್ರಿ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿ 45.000 ಬೆಲೆ ಬಾಳುವ ಮೇಕೆಗಳನ್ನ ಕಳವು ಮಾಡಲಾಗಿದೆ. ಈ ಸಂಭಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.