ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮದ್ಯ ಮರಾಟ ನಿಷೇಧದ ನಡುವೆಯೂ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾತನನ್ನು ಕುಂದಾಪುರ ಪೊಲೀಸ್ ರು ಬಂಧಿಸಿದ್ದಾರೆ. ಕುಂದಾಪುರದ ಶೇಷಾದ್ರಿ(43) ಎನ್ನುವವರು ಅಕ್ರಮ ಮದ್ಯ ಮಾರಾಟ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಕುಂದಾಪುರ ತಾಲೂಕು ಹೆಸ್ಕತ್ತೂರು ಗ್ರಾಮದ ಹೆಸ್ಕತ್ತೂರು ಸಾನ್ವಿ ಕೋಳಿ ಫಾರ್ಮ್ ಹಿಂಬದಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಮೇರೆ ಧಾಳಿ ಮಾಡಿದಾಗ. ರಟ್ಟಿನ ಬಾಕ್ಸ್ ನಲ್ಲಿ ಮದ್ಯದ ಬಾಟಲಿಗಳನ್ನು ಇಟ್ಟು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.